ಮಂಗಳೂರಿನಲ್ಲಿ ಗುಡುಗು ಸಹಿತ ಭಾರೀ ಮಳೆ, ಇನ್ನೂ 3 ದಿನ ಮಳೆ. Rainfall in mangalore

Share this post

ರಾಜ್ಯದ ಎಲ್ಲಾ ಸಮಸ್ತ ರೈತ ಬಾಂಧವರೇ ನಿಮಗೆಲ್ಲ ಮತ್ತೊಮ್ಮೆ ನಮ್ಮ ಕನ್ನಡ ಬಂದು ಜಾಲತಾಣಕ್ಕೆ ಸ್ವಾಗತ. ಸತತವಾಗಿ ಎರಡು ದಿನಗಳಿಂದ ಮುಂಗಾರು ಪೂರ್ವ ಮಳೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸುರಿಯುತ್ತಿದ್ದು, ನಿನ್ನೆ ಮಂಗಳೂರಿನಲ್ಲಿ ಭಾರಿ ಪ್ರಮಾಣದ ಮಳೆ ಬಂದಿದೆ.Rainfall in mangalore

WhatsApp Group Join Now
Telegram Group Join Now

ಮಂಗಳೂರಿನಲ್ಲಿ ನಿನ್ನೆ ಸಂಜೆ 7:30ರ ವೇಳೆಗೆ ಭಾರಿ ಪ್ರಮಾಣದಲ್ಲಿ ಗುಡುಗು ಸಹಿತ ಮಳೆ ಸುರಿದಿದ್ದು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ( mangalore international airport ) ಬೆಂಗಳೂರಿನಿಂದ ಬರಬೇಕಾಗಿದ್ದ ಎಲ್ಲಾ ವಿಮಾನಗಳನ್ನು ಬೇರೆ ಕಡೆಗೆ ಡೈವರ್ಟ್ ಮಾಡಲಾಗಿದೆ.

Rainfall in mangalore
Rain fall in mangalore

Rainfall in mangalore

ಇದನ್ನೂ ಓದಿ: 2 ಲಕ್ಷ ರೈತ ಫಲಾನುಭವಿಗಳ ಖಾತೆಗೆ ₹76 ಕೋಟಿ ಬೆಳೆ ವಿಮೆ ಜಮಾ. Bele vime amount

ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತ ಮತ್ತು ಅತಿ ಹೆಚ್ಚಿನ ತಾಪಮಾನದ ಪರಿಣಾಮವಾಗಿ, ಕರಾವಳಿ ಜಿಲ್ಲೆಯ ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ದಾಖಲೆ ಮಟ್ಟಕ್ಕೆ ಮಳೆ ಬೀಳುತ್ತಿದೆ.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಈಗಾಗಲೇ ಎಲ್ಲೋ ಅಲರ್ಟನ್ನು ಘೋಷಣೆ ಮಾಡಿದ್ದು, ಇನ್ನು ಎರಡು ಮೂರು ಗಂಟೆಗಳ ಕಾಲ ಅತಿ ಹೆಚ್ಚಿನ ಮಳೆ ಬರಲಿದೆ ಎಂದು ಎಚ್ಚರಿಕೆಯನ್ನು ನೀಡಲಾಗಿದೆ.

ಇದಲ್ಲದೆ ನಿನ್ನೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೂ ಸಹ ಭಾರಿ ಪ್ರಮಾಣದ ಮಳೆ ಸುರಿದಿದ್ದು, ಬೆಂಗಳೂರಿಗರ ಮೊಗದಲ್ಲಿ ಮಂದಹಾಸ ಮೂಡಿದಂತಾಗಿದೆ. ಅಲ್ಲದೆ ಹಾಸನ ಜಿಲ್ಲೆಯಲ್ಲಿ ಸಹ ಭಾರಿ ಪ್ರಮಾಣದ ಮಳೆ ಬಿದ್ದಿದ್ದು, ಗುಡುಗು ಮಿಂಚು ಸಹಿತ ಮಳೆ ಬೀಳುವ ಸಾಧ್ಯ ಇದೆ ಎಂದು ತಿಳಿಸಲಾಗಿದೆ.

Indian meteorological department
Mausam.imd.gov.in

ಪಿಯುಸಿ ಪರೀಕ್ಷೆಗೆ ಹೆದರಿ ನಾಪತ್ತೆಯಾಗಿದ್ದ ದಿಗಂತ್ ಕೊನೆಗೂ ಪತ್ತೆ. puc student diganth

ಏಪ್ರಿಲ್ 16ನೇ ತಾರೀಖಿನಿಂದ ವರ್ಷದ ಹೊಸ ಮಳೆ ಪ್ರಾರಂಭವಾಗಲಿದ್ದು, ಆದರೆ ಈ ವರ್ಷ ಪೂರ್ವ ಮುಂಗಾರು ಮಳೆಗಳು ಬಲು ಬೇಗನೆ ಬರಲಿವೆ. ಕಳೆದ ವರ್ಷದಂತೆ ಈ ವರ್ಷವೂ ಅತಿಹೆಚ್ಚಿನ ಮುಂಗಾರು ಮಳೆ ಸುರಿಯಲಿದೆ.

ಎಲ್ ನೀನೋ ( el nino) ಪ್ರಭಾವ ಕಡಿಮೆಯಾಗಿ ಲಾ ನೀನಾ ( La nina ) ಪ್ರಭಾವ ಜಾಸ್ತಿ ಆಗುತ್ತಿರುವುದರಿಂದ ದೇಶಕ್ಕೆ ಈ ವರ್ಷ ಉತ್ತಮ ಮುಂಗಾರು ಪ್ರವೇಶ ( mansoon 2025 ) ಆಗಲಿದೆ ಎಂದು ಭಾರತದ ಹವಾಮಾನ ಇಲಾಖೆ ( indian meteorological department ) ಮತ್ತು ಖಾಸಗಿ ಹವಾಮಾನ ಇಲಾಖೆಯು ( skymet weather ) ತಿಳಿಸಿವೆ.

ಮಳೆ ಮಾಹಿತಿ ಪಡೆಯಲು ಇಲ್ಲಿ ಒತ್ತಿ .

https://mausam.imd.gov.in/responsive/rainfallinformation.php


Share this post
WhatsApp Group Join Now
Telegram Group Join Now
About kannadabandhu 31 Articles
Hi everyone, my self is malatesha. Im graduated bachelor science and i have 2 years experience in content writing.

Be the first to comment

Leave a Reply

Your email address will not be published.


*