
ನಾಡಿನ ಸಮಸ್ತ ರೈತ ಬಾಂಧವರಿಗೆ ಮತ್ತು ಓದುಗರಿಗೆ ನಮ್ಮ ಕನ್ನಡ ಬಂದು ಜಾಲತಾಣದಿಂದ ನಮಸ್ಕಾರಗಳು. ಪ್ರತಿವರ್ಷದಂತೆ ಈ ವರ್ಷವೂ ಸಹ ಮುಂಗಾರು ಮಳೆಗಳು ಎಂದಿನಂತೆ ಕರ್ನಾಟಕಕ್ಕೆ ಜೂನ್ ಒಂದನೇ ತಾರೀಖಿನಿಂದ ಆರಂಭವಾಗಲಿದ್ದು, ಈ ವರ್ಷ ಮಳೆ ಉತ್ತಮವಾಗಲಿದೆ ಎಂದು ಹವಾಮಾನ ಇಲಾಖೆ ತಜ್ಞರ ಅಭಿಪ್ರಾಯವಾಗಿದೆ. mansoon 2025
ಭಾರತೀಯ ಸಂಪ್ರದಾಯದ ಪ್ರಕಾರ ಚಂದ್ರಮಾನ ಯುಗಾದಿ ನಂತರ ವರ್ಷದೊಡಕು ಅಥವಾ ರೈತರ ಹೊಸ ವರ್ಷ ಆರಂಭವಾಗುತ್ತದೆ. ಯುಗಾದಿ ನಂತರ ಕೃಷಿಕರು ತಮ್ಮ ಜಮೀನಿನ ಒಳಗೆ ಇರುವಂತಹ ಎಲ್ಲಾ ಕೆಲಸಕಾರ್ಯಗಳನ್ನು ಮಾಡಲು ಪ್ರಾರಂಭಿಸುತ್ತಾರೆ.

Mansoon rain 2025
ಇದನ್ನೂ ಓದಿ: Bele parihara list : ಬೆಳೆ ಪರಿಹಾರ ಹಣ ಜಮಾ ಆದವರ ರೈತರ ಪಟ್ಟಿ ಬಿಡುಗಡೆ, ಚೆಕ್ ಮಾಡಿ.
ಅದೇ ರೀತಿಯಾಗಿ ಚಂದ್ರಮಾನ ಯುಗಾದಿಯ ನಂತರ ವರ್ಷದ ಮೊದಲು ಮಳೆಯ ನಕ್ಷತ್ರಗಳು ಆರಂಭವಾಗುತ್ತವೆ. ಭಾರತದಲ್ಲಿ ಒಟ್ಟು 11 ಮಳೆ ನಕ್ಷತ್ರಗಳು ಉತ್ತಮವಾಗಿ ಮಳೆ ಸುರಿಸುತ್ತವೆ.
ಆರಿದ್ರ ಪುನರ್ವಸು ಪುಷ್ಯ ಆಶ್ಲೇಷ ಮಗ ಒಬ್ಬ ಉತ್ತರ ಹಸ್ತ ಚಿತ್ತ ಸ್ವಾತಿ ಮತ್ತು ವಿಶಾಖ ಮಳೆ ನಕ್ಷತ್ರಗಳು ಹೆಚ್ಚು ಮಳೆ ಬರುವಂತಹ ಮಳೆ ನಕ್ಷತ್ರಗಳಾಗಿವೆ. ಇದರಲ್ಲಿ ಪುನರ್ವಸು ಆರಿದ್ರ ಪುಷ್ಯ ಮತ್ತು ಆಶ್ಲೇಷ ದೊಡ್ಡ ಮಳೆಯ ನಕ್ಷತ್ರಗಳು ಆಗಿರುತ್ತವೆ ಇವುಗಳು ಜೂನ್ ತಿಂಗಳಿನಿಂದ ಸಪ್ಟಂಬರ್ ತಿಂಗಳ ತನಕ ಅತಿ ಹೆಚ್ಚು ಮಳೆಯನ್ನು ಸುರಿಸುತ್ತದೆ.
ಅಶ್ವಿನಿ ಮಳೆ ಆರಂಭ.
2025ರ ಪ್ರಸಕ್ತ ವರ್ಷದ ಏಪ್ರಿಲ್ 13 ನೇ ತಾರೀಖಿನಿಂದ ಅಶ್ವಿನಿ ಮಳೆಯು ಆರಂಭವಾಗಲಿದ್ದು, ಈ ಮಳೆಯು ಪೂರ್ವ ಮುಂಗಾರು ಮಳೆಗಳನ್ನು ತರಿಸಲು ಸಹಾಯಕವಾಗುತ್ತದೆ.
ಭರಣಿ ಮಳೆ.
ಏಪ್ರಿಲ್ 27 ನೇ ತಾರೀಖಿನಿಂದ ಮೇ 10ನೇ ತಾರೀಕಿನ ತನಕ ಭರಣಿ ಮಳೆಯು ಇರುತ್ತದೆ.
ಕೃತಿಕಾ ಮಳೆ.
ಇದಾದ ನಂತರ ಮೇ 11ನೇ ತಾರೀಖಿನಿಂದ ಮೇ 23ನೇ ತಾರೀಕಿನ ತನಕ ಕೃತಿಕಾ ಮಳೆ ನಕ್ಷತ್ರ ಇರುತ್ತದೆ. ಈ ಸಮಯದಲ್ಲಿ ಅರಬ್ಬಿ ಸಮುದ್ರದಿಂದ ಏನಾದರೂ ಚಂಡಮಾರುತಗಳು ಉಂಟಾದಲ್ಲಿ ಈ ಮಳೆಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಇದರಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಗಳು ಸಾಧಾರಣ ಮತ್ತು ಹೆಚ್ಚು ವ್ಯತ್ಯಾಸ ಇರುತ್ತವೆ.
ರೋಹಿಣಿ ಮಳೆ.
ನಂತರ ಮೇ 24ನೇ ತಾರೀಕಿನಿಂದ ಜೂನ್ 6ನೇ ತಾರೀಕಿನ ತನಕ ರೋಹಿಣಿ ಮಳಿಗೆ ಬರಲಿದ್ದು ಈ ಸಮಯದಲ್ಲಿ ಕರ್ನಾಟಕಕ್ಕೆ ಮುಂಗಾರು ಪ್ರವೇಶ ಆಗುತ್ತದೆ. ನಮ್ಮ ದೇಶದಲ್ಲಿ ಪ್ರಪ್ರಥಮವಾಗಿ ವರ್ಷದಲ್ಲಿ ಮುಂಗಾರು ಪ್ರವೇಶ ಮಾಡುವ ರಾಜ್ಯವೆಂದರೆ ಅದು ಕೇರಳ.
ಮೃಗಶಿರ ಮತ್ತು ಆರಿದ್ರ ,ಪುಷ್ಯ ಮಳೆ ನಕ್ಷತ್ರಗಳು
ನಂತರದಲ್ಲಿ ಜೂನ್ 7ನೇ ತಾರೀಖಿನಿಂದ 20ನೇ ತಾರೀಖಿನ ತನಕ ಮೃಗಶಿರಮಳೆಯು, ಆಮೇಲೆ ಜೂನ್ 21ರಿಂದ ಜುಲೈ 4ರ ತನಕ ಆರಿದ್ರ ಮಳೆಯ, ಜುಲೈ 5ನೇ ತಾರೀಖಿನಿಂದ 19ನೇ ತಾರೀಕು ತನಕ ಪುನರ್ವಸು ಮಳೆ, ಹಾಗೆ ಜುಲೈ 20 ರಿಂದ ಅಗಸ್ಟ್ ಎರಡನೇ ತಾರೀಖಿನ ತನಕ ಪುಷ್ಯ ಮಳೆ ನಕ್ಷತ್ರಗಳು ಇದ್ದು ಇವುಗಳು ಅತಿ ಹೆಚ್ಚು ಮಳೆಗಳನ್ನು ರಾಜ್ಯಕ್ಕೆ ಸುರಿಸುತ್ತವೆ.
ಆಶ್ಲೇಷ ಮತ್ತು ಮಗಿ ಮಳೆ ನಕ್ಷತ್ರ
ನಂತರ ಅಗಸ್ಟ್ ತಿಂಗಳಿನಲ್ಲಿ 3ನೇ ತಾರೀಖಿನಿಂದ 16ನೇ ತಾರೀಖಿನ ತನಕ ಆಶ್ಲೇಷ ಮಳೆ ಇದ್ದು ಆಗಸ್ಟ್ 17 ರಿಂದ 23ನೇ ತಾರೀಖಿನ ತನಕ ಮಗಿ ಮಳೆ ಇರುತ್ತದೆ. ಸ್ಥಳೀಯರ ಮತ್ತು ಕೃಷಿಯಕರ ಗಾದೆಯ ಪ್ರಕಾರ ಮಗ್ಗಿ ಮಳೆಗೆ ಬಂದರೆ ಮಗಿ ಹೋದರೆ ಹೊಗಿ ಎಂದು ಹೇಳಲಾಗುತ್ತದೆ.
ಉತ್ತರಿ ಮತ್ತು ಹಸ್ತ ಮಳೆ.
ಇದಾದ ನಂತರ ಆಗಸ್ಟ್ 30 ರಿಂದ ಸೆಪ್ಟೆಂಬರ್ 12ರ ತನಕ ಒಬ್ಬ ಮಳೆ ಸಪ್ಟಂಬರ್ 13ನೇ ತಾರೀಖಿನಿಂದ 26 ನೇ ತಾರೀಖಿನ ತನಕ ಉತ್ತರ ಮಳೆ, ಆಮೇಲೆ ಸಪ್ಟೆಂಬರ್ 27 ರಿಂದ ಅಕ್ಟೋಬರ್ 19 ರ ತನಕ ಹಸ್ತ ಮಳೆಯು ಅಕ್ಟೋಬರ್ 10 ರಿಂದ 24 ನೇ ತಾರೀಖಿನ ತನಕ ಚಿತ್ತ ನಕ್ಷತ್ರ ಇರಲಿದೆ.
ನೀವು ಇನ್ನೂ ಹೆಚ್ಚಿನ ಮಳೆಯ ಬಗ್ಗೆ ಮಾಹಿತಿಯನ್ನು ಪಡೆಯಲು ಲೇಖನದ ಕೊನೆಯಲ್ಲಿ ನಾವು ಭಾರತೀಯ ಹವಾಮಾನ ಇಲಾಖೆ ಅಧಿಕೃತ ಜಾಲತಾಣದ ಕೊಂಡಿಯನ್ನು ಆಂಟಿಸಿರುತ್ತೇವೆ ಅದನ್ನು ಒತ್ತಿ ನೀವು ಮಾಹಿತಿಯನ್ನು ಕಲೆ ಹಾಕಿಕೊಳ್ಳಬಹುದು.
Note: Check out this indian meteorological department website link for daily rain updates,
Leave a Reply