
ಎಲ್ಲಾ ರೈತ ಬಾಂಧವರಿಗೆ ನಮ್ಮ ಕನ್ನಡ ಬಂಧು ಜಾಲತಾಣಕ್ಕೆ ಮತ್ತೊಮ್ಮೆ ಸ್ವಾಗತ. ಈ ಅಂಕಣದಲ್ಲಿ ನಾವು ನಿನ್ನೆ ರಾಜ್ಯದ ಬಜೆಟ್ ಮಂಡನೆಯಲ್ಲಿ ಆದೇಶ ನೀಡಲಾದ , ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಕುರಿತಂತೆ ಮಾಹಿತಿ ತಿಳಿಯೋಣ. Waiver of interest on farmers loans
Waiver of interest on farmers loans

ಇದನ್ನೂ ಓದಿ: ಅಡಿಕೆ ರೈತರಿಗೆ ₹104 ಕೋಟಿ ಬೆಳೆ ನಷ್ಟ ಪರಿಹಾರ : areca crop loss compensation
ಈ ವರ್ಷದ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ವರ್ಷದ ಬಜೆಟ್ ಮಂಡನೆ ಮಾಡಿದ್ದು ಇದರಲ್ಲಿ ಸರ್ಕಾರವು ರಾಜ್ಯದ ರೈತರ ಸಹಕಾರಿ ಬ್ಯಾಂಕಿನಲ್ಲಿ ಮಾಡಿದಂತಹ ಸಾಲದ ಬಡ್ಡಿಮನ್ನ ಮಾಡಲು ಅನುದಾನವನ್ನು ಮೀಸಲಿಡಲಾಗಿದೆ.
ಈ ಬಾರಿಯ ಬಜೆಟ್ ಮಂಡನೆಯಲ್ಲಿ ( karnataka budget 2025 ) ಮುಖ್ಯಮಂತ್ರಿ ಸಿದ್ದರಾಮಯ್ಯನವರು ( siddaramaiah ) ರಾಜ್ಯದ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತನ್ನು ನೀಡಿ ಕೃಷಿ, ರೇಷ್ಮೆ, ತೋಟಗಾರಿಕೆ ,ಪಶು ಸಂಗೋಪನೆ, ಮೀನುಗಾರಿಕೆ ಇಲಾಖೆಯಲ್ಲಿ , ಈ ಎಲ್ಲ ಯೋಜನೆಗಳಿಗೆ ಅನುದಾನವನ್ನು ನೀಡಲಾಗಿದೆ.
ರೈತರು ಪ್ರತಿ ವರ್ಷ ಮುಂಗಾರು ಹಂಗಾಮು ಮತ್ತು ಸಿಂಗಾರು ಬೆಳೆಗಳಿಗೆ ಪಡೆದಂತಹ ಕೃಷಿ ಸಾಲದ ಮೇಲಿನ ಬಡ್ಡಿಮನ್ನವನ್ನು ಮಾಡಲು ₹240 ಕೋಟಿ ಹಣವನ್ನು ಮೀಸಲಿಟ್ಟು, ರಾಜ್ಯದ ಸಹಕಾರಿ ಬ್ಯಾಂಕುಗಳ ಒಳಗೆ ಪಡೆದಂತಹ ಸಾಲದ ಮೇಲೆ ಇರುವಂತಹ ಬಡ್ಡಿಯನ್ನು ಮನ್ನಾ ಮಾಡಲಾಗುವುದೆಂದು ತಿಳಿಸಿದ್ದಾರೆ.

ಈ ಸಹಕಾರಿ ಬ್ಯಾಂಕುಗಳಲ್ಲಿ ಡಿಸಿಸಿ ಬ್ಯಾಂಕ್ ( dcc bank )ಪಿಕಾರ್ಡ್ ಬ್ಯಾಂಕ್ ಒಳಗೊಂಡಿದ್ದು, ರೈತರಗಳು ಕೃಷಿ ಚಟುವಟಿಕೆಗಳನ್ನು ಮಾಡಲು ಸಮಯಕ್ಕೆ ತಕ್ಕಂತೆ ಬೇಕಾದ ಹಣವನ್ನು ಬ್ಯಾಂಕಿನ ಸಹಾಯದಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಳ್ಳುತ್ತಾರೆ.
ಅದಕ್ಕೆ ಈ ಬಜೆಟ್ ನ ಮಂಡನೆಯಲ್ಲಿ ರಾಜ್ಯದ ₹37 ಲಕ್ಷ ರೈತರಿಗೆ ₹28,000 ಕೋಟಿ, ಧನಸಹಾಯವನ್ನು ರಾಜ್ಯ ಸರ್ಕಾರದಿಂದ ನೀಡಲಾಗುತ್ತದೆ ಎಂದು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ.
ಮತ್ತು ಬಜೆಟ್ ನಲ್ಲಿ ಇನ್ನೂ ಹಲವಾರು ಕಾರ್ಯಕ್ರಮಗಳ ಕುರಿತು ಘೋಷಣೆಗಳನ್ನು ಮಾಡಿದ್ದು ಮುಂದಿನ ಲೇಖನದಲ್ಲಿ ನಾವು ಸಂಪೂರ್ಣವಾಗಿ ವಿವರವನ್ನು ನೀಡುತ್ತೇವೆ. ಜಾಲತಾಣದ ವಾಟ್ಸಪ್ ಮತ್ತು ಟೆಲಿಗ್ರಾಂ ಚಾನೆಲ್ ಗಳಿಗೆ ಈಗಲೇ ಜಾಯಿನ್ ಆಗಿರಿ.
ಇದನ್ನೂ ಓದಿ: Bele vime parihara : ಈ ಜಿಲ್ಲೆಯ ರೈತರಿಗೆ 2,333 ಲಕ್ಷ ಮುಂಗಾರು ಬೆಳೆ ನಷ್ಟ ಪರಿಹಾರ ಜಮಾ.
Agricultural
yes