
ಭಾರತೀಯ ಪ್ರಜೆಯ ಸಂವಿಧಾನದ 326 ನೇ ವಿಧಿಯ ಮತದಾನದ ಹಕ್ಕನ್ನು ನಾಗರಿಕನಿಗೆ ನೀಡಲು ಕೇಂದ್ರ ಸರ್ಕಾರವು ಬದ್ಧವಾಗಿದೆ ಇದರಂತೆ, ಆಧಾರ್ ಕಾರ್ಡ್ ಮಾತ್ರವೇ ವ್ಯಕ್ತಿಯ ಗುರುತನ್ನು ಖಚಿತಪಡಿಸುವುದಲ್ಲದೆ ಮತದಾರ ಚೀಟಿಯನ್ನು ಸಹ ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಲು ಚುನಾವಣಾ ಆಯೋಗ ತಾಂತ್ರಿಕ ತಜ್ಞರು ಸಮಾಲೋಚನೆಯನ್ನು ನಡೆಸಿದ್ದಾರೆ.
ಈ ಕುರಿತಾಗಿ ಸುಪ್ರೀಂಕೋರ್ಟ್ ಮತ್ತು ಕಾನೂನಿನ ನಿರ್ದೇಶನದಂತೆ ಮತದಾರರ ಗುರುತಿನ ಚೀಟಿಯನ್ನು ಆಧಾರ್ ಕಾರ್ಡ್ ಲಿಂಕ್ ಮಾಡಲಾಗುವುದು ಎಂದು ಚುನಾವಣಾ ಆಯೋಗದ ತಾಂತ್ರಿಕ ತಜ್ಞರು ಮತ್ತು UIDAI ನಡುವೆ ಶೀಘ್ರವಾಗಿ ಚರ್ಚಿಸಲಾಗುವುದೆಂದು ಆಯೋಗ ತಿಳಿಸಿದೆ.
Aadhar card link with voter id

EPIC ( ಎಲೆಕ್ಷನ್ ಫೋಟೋ ಐಡೆಂಟಿಟಿ ಕಾರ್ಡ ) ಎಂದು ಕರೆಯುವ VOTER ID 18 ವರ್ಷ ತುಂಬಿದ ಭಾರತದ ಎಲ್ಲ ನಾಗರಿಕನಿಗೆ ಸಿಗುವಂತಹ ಒಂದು ವಿಶಿಷ್ಟ ಅಧಿಕಾರದ ಗುರುತಿನ ಚೀಟಿ ಆಗಿದೆ. ಅಲ್ಲದೆ ನೀವು ಪಡಿತರ ಚೀಟಿಗಳನ್ನು ಪಡೆಯಲು ಸಹಾಯಕ ಆಗುತ್ತದೆ.
ಇದನ್ನೂ ಓದಿ: Kisan credit card benefits : ರೈತರಿಗೆ 5 ಲಕ್ಷದ ಕಿಸಾನ್ ಕ್ರೆಡಿಟ್ ಕಾರ್ಡ್.
ನೀವು ಈ ಮತದಾರರ ಚೀಟಿ ಅಥವಾ ವೋಟರ್ ಐಡಿ ಇದ್ದರೆ ಬೇರೆ ದೇಶಕ್ಕೂ ಸಹ ವಿಮಾನದಲ್ಲಿ ಸಂಚಾರ ಮಾಡಬಹುದಾಗಿದೆ. ಉದಾಹರಣೆಗೆ ಭಾರತದ ನೆರೆಯ ದೇಶಗಳಾದ ಭೂತಾನ್ ಮತ್ತು ನೇಪಾಳಕ್ಕೆ ನೀವು ಕೇವಲ ವೋಟರ್ ಐಡಿ ಮುಖಾಂತರ ಸಂಚರಿಸಬಹುದು.
ಒಂದು ವೇಳೆ ತಮ್ಮ ಬಳಿ ವೋಟರ್ ಐಡಿ ಇಲ್ಲದೆ ಇದ್ದಲ್ಲಿ ಅರ್ಜಿ ಸಲ್ಲಿಸಲು ನಮೂನೆ 6 ರನ್ನು ಭರ್ತಿ ಮಾಡಿ ತಮ್ಮ ಬೂತ್ ಮಟ್ಟದಲ್ಲಿ ಇರುವಂತಹ ಬಿ ಎಲ್ ಒ ಅರ್ಜಿ ಸಲ್ಲಿಸಬೇಕು.
ಇಲ್ಲವೇ ಲೇಖನದ ಕೊನೆಯಲ್ಲಿ ನೀಡಿರುವ ಮತದಾರ ಸೇವಾ ಪೋರ್ಟಲ್ ವೆಬ್ಸೈಟ್ ಗೆ ತೆರಳಿ ಅರ್ಜಿಯನ್ನು ಸಲ್ಲಿಸಬಹುದು.
Voter ID application website : www.eci.gov.in
Leave a Reply