
ಕರ್ನಾಟಕ ರಾಜ್ಯಾದ್ಯಂತ ಸುದ್ದಿಯಾಗಿರುವ ಪರಂಗಿಪೇಟೆಯ ದಿಗಂತ್ ನಾಪತ್ತೆ ಪ್ರಕರಣವು ಇದೀಗ ಸುಖಾಂತ್ಯ ಕಂಡಿದೆ. ಈ ಕುರಿತಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸೂಪರ್ ಇಂಡೆಂಟ್ ಪೊಲೀಸ್ ಯತೀಶ್ ಅವರು ಸುದ್ದಿ ಮಾಧ್ಯಮದೊಂದಿಗೆ ಮಾಹಿತಿ ನೀಡಿದ್ದಾರೆ.puc student diganth
ಪರಂಗಿಪೇಟೆಯ ದಿಗಂತ್ ಎಂಬಾತ ಪಿಯುಸಿ ಪರೀಕ್ಷೆಗೆ ಹೆದರಿ ಕಳೆದ ವಾರ ಮನೆಯಿಂದ ಓಡಿ ಹೋಗಿದ್ದನು. ಇದು ರಾಜ್ಯಾದ್ಯಂತ ಭಾರಿ ಚರ್ಚೆಗೆ ಮತ್ತು ಆತಂಕಕ್ಕೆ ಒಳಗಾಗಿ, ಎಲ್ಲಾ ಜಿಲ್ಲೆಗಳಲ್ಲಿ ಪೊಲೀಸ್ ತಂಡಗಳು ದಿಗಂತನ ಇರುವಿಕೆಗೆ ಹುಡುಕಾಡುತ್ತಿದ್ದವು.

puc student diganth
ಇದನ್ನು ಓದಿ: Bele vime parihara : ಈ ಜಿಲ್ಲೆಯ ರೈತರಿಗೆ 2,333 ಲಕ್ಷ ಮುಂಗಾರು ಬೆಳೆ ನಷ್ಟ ಪರಿಹಾರ ಜಮಾ.
ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗಿದ್ದು, ದಿಗಂತ್ ಎಂಬ ವಿದ್ಯಾರ್ಥಿ ಪರೀಕ್ಷೆಯನ್ನು ಬರೆಯಬೇಕಿತ್ತು. ಆದರೆ ಪರೀಕ್ಷೆಗೆ ಹೆದರಿ ಆದ ಮನೆಯಿಂದ ನಾಪತ್ತೆಯಾಗಿದ್ದ.
ಫೆಬ್ರುವರಿ 25ರಂದು ಸಂಜೆ ಮನೆ ಬಿಟ್ಟು ದಿಗಂತ್, ರೈಲು ಹಳೆಯ ಹತ್ತಿರ ತಾನು ತೊಟ್ಟಿರುವಂಥ ಚಪ್ಪಲಿ ಮತ್ತು ಮೊಬೈಲ್ ಅನ್ನು ಬಿಸಾಕಿ ನಡೆದುಕೊಂಡು ಹೋಗಿರುತ್ತಾರೆ.
2 ಲಕ್ಷ ರೈತ ಫಲಾನುಭವಿಗಳ ಖಾತೆಗೆ ₹76 ಕೋಟಿ ಬೆಳೆ ವಿಮೆ ಜಮಾ. Bele vime amount
ಅನಂತರಾ ಅವನು ಅಪರಿಚಿತ ವ್ಯಕ್ತಿಯಿಂದ ಬೈಕ್ ಮೂಲಕ ಲಿಫ್ಟ್ ಪಡೆದು ಮಂಗಳೂರಿಗೆ ಬಂದಿರುತ್ತಾನೆ. ಇದಾದ ನಂತರ ಮೈಸೂರಿಗೆ ಬಸ್ಸಿನಲ್ಲಿ ಇಳಿದು ಬೆಂಗಳೂರಿನ ಕೆಂಗೇರಿ ನಂದಿ ಹಿಲ್ಸ್ ಮತ್ತು ರೆಸಾರ್ಟ್ ಒಂದರಲ್ಲಿ ಹಣದ ಅವಶ್ಯಕತೆಗೆ ಕೆಲಸಕ್ಕೆ ಸೇರಿದ್ದಾನೆ.
ಇದಾದ ನಂತರ ಮೂರು ದಿನಗಳ ಕಾಲ ಕೆಲಸ ನಿರ್ವಹಿಸಿ ಹಣ ಪಡೆದು ಮೈಸೂರಿಗೆ ಬಂದು ಅಲ್ಲಿಂದ ಮುರುಡೇಶ್ವರ ಎಕ್ಸ್ಪ್ರೆಸ್ ರೈಲಿನ ಮುಖಾಂತರ ಉಡುಪಿಗೆ ಬಂದಿರುತ್ತಾನೆ.
ಅವನನ್ನು ಯಾರು ಕರೆದುಕೊಂಡು ಹೋಗಿರಲಿಲ್ಲ ನಾನೇ ಹೋಗಿದ್ದೆ ಎಂದು ದಿಗಂತ್ ಪೊಲೀಸರ ಮುಂದೆ ಮಾಹಿತಿಯನ್ನು ಹಂಚಿಕೊಂಡಿದ್ದಾನೆ. ಸದ್ಯ ಹೈಕೋರ್ಟಿನಲ್ಲಿ ಇದರ ಕುರಿತಾಗಿ ಪ್ರಕರಣವು ದಾಖಲಾಗಿ ಮಾಹಿತಿಯನ್ನು ಕಲೆ ಹಾಕಲು ಬಾಲ ಮಂದಿರದಲ್ಲಿ ಇರಿಸಲಾಗಿದೆ.
Leave a Reply