
ಕರ್ನಾಟಕ ರಾಜ್ಯ ಸರ್ಕಾರದ ಕೃಷಿ ಭಾಗ್ಯ ಯೋಜನೆ Krishi bhagya yojane ಅಡಿಯಲ್ಲಿ ರಾಜ್ಯದ ರೈತರಗಳು ಮಳೆಯ ಆಶ್ರಿತ ಪ್ರದೇಶಗಳ ಕೃಷಿ ನೀರಾವರಿ ನೀರಿನ ಭವಣೆಯನ್ನು ನಿವಾರಿಸುವ ಸಲುವಾಗಿ, ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ.
ಕೃಷಿಭಾಗ್ಯ ಯೋಜನೆ ( krishi bhagya yojane )ಅಡಿಯಲ್ಲಿ ರೈತರಿಗೆ ಶೇಕಡ 80 ರಿಂದ 90% ಸಬ್ಸಿಡಿಯಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.

Krishi bhagya yojane agriculture pond
ಇದನ್ನೂ ಓದಿ: Bele vime parihara : ಈ ಜಿಲ್ಲೆಯ ರೈತರಿಗೆ 2,333 ಲಕ್ಷ ಮುಂಗಾರು ಬೆಳೆ ನಷ್ಟ ಪರಿಹಾರ ಜಮಾ.
ಯೋಜನೆಯಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾದ ರೈತರಗಳ ಜಮೀನಿನಲ್ಲಿ ಕೃಷಿ ಹೊಂಡವನ್ನು ನಿರ್ಮಾಣ ಮಾಡಲು ಧನ ಸಹಾಯವನ್ನು ಕೃಷಿ ಇಲಾಖೆ ವತಿಯಿಂದ ನೀಡಲಾಗುತ್ತದೆ. ಕೃಷಿ ಯೋಜನೆಯ ಕೃಷಿ ಹೊಂಡದ ಅಳತೆ ತಂತಿಬೆಲೆ ನೀರಾವರಿ ವ್ಯವಸ್ಥೆ, polythene ಅಳವಡಿಕೆ ಅಥವಾ ಹೊದಿಕೆ, ಈ ಎಲ್ಲಾ ಕೆಲಸಕ್ಕೆ ಸೂಕ್ತ ಮಾರ್ಗದರ್ಶನ ಮತ್ತು ಹಣವನ್ನು ನೀಡಲಾಗುತ್ತದೆ.
ಆಸಕ್ತಿವುಳ್ಳ ಮತ್ತು ಅರ್ಹ ರೈತರು ಸರ್ಕಾರದ K kisan website ಗೆ ಮುಖಾಂತರ ಘಟಕಗಳ ಸ್ಥಾಪನೆಗೆ, ಸೂಕ್ತ ಪರಿಶೀಲನೆ ಮಾಡಿ ನಂತರದಲ್ಲಿ ಘಟಕದ ವೆಚ್ಚವನ್ನು ಸರ್ಕಾರದ ವತಿಯಿಂದ ಭರಿಸಲಾಗುತ್ತದೆ.
Spinkler set application : ರೈತರಿಗೆ 90% ಸಬ್ಸಿಡಿ ದರದಲ್ಲಿ ಸ್ಪಿಂಕ್ಲರ್ ಪೈಪ್ ಗೆ ಅರ್ಜಿ ಆಹ್ವಾನ.
ಯಾರೆಲ್ಲ ಅರ್ಜಿ ಸಲ್ಲಿಸಲು ಅವಕಾಶ?
ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ರೈತನ ಕೃಷಿ ಜಮೀನು ಇರತಕ್ಕದ್ದು. ಕರ್ನಾಟಕ ರಾಜ್ಯದ ಮೂಲ ನಿವಾಸಿಗಳಾಗಿರಬೇಕು. ರೈತರು ಸಣ್ಣ ಮತ್ತು ಅತಿ ಸಣ್ಣ ರೈತ ವರ್ಗಕ್ಕೆ ಸೇರಿದವರಾಗಿರಬೇಕು. ಈ ಹಿಂದೆ ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಸಬ್ಸಿಡಿ ಪಡೆದಿರಬಾರದು. ಇಂಥವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಹಾಗಾದ್ರೆ ಯಾವೆಲ್ಲ ದಾಖಲೆ ಬೇಕು ಅರ್ಜಿ ಹಾಕೋಕೆ?
- ರೈತನ ಅಥವಾ ರೈತಳ ಆಧಾರ್ ಕಾರ್ಡ್
- ಭೂಮಿಯ ಉತಾರ ಅಥವಾ ಪಹಣಿ ಪತ್ರ
- ಬ್ಯಾಂಕ್ ಪಾಸ್ ಬುಕ್ ಪ್ರತಿ,
- ರೈತನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ( ಅನ್ವಯ ಅದಲ್ಲಿ ಮಾತ್ರ )
- ಸಕ್ರಿಯದಲ್ಲಿರುವಂತಹ ಮೊಬೈಲ್ ಸಂಖ್ಯೆ ಬೇಕಾಗುತ್ತದೆ.
ಅರ್ಜಿ ಸಲ್ಲಿಸಿದ ನಂತರ ಮುಂದೇನು?
ಅರ್ಜಿ ಸಲ್ಲಿಸಿದ ರೈತ ತಮ್ಮ ಅರ್ಜಿ ಸ್ಥಿತಿಯನ್ನು ಆಹಾರ ಇಲಾಖೆ ವೆಬ್ಸೈಟ್ ಇಲ್ಲವೇ k kisan ಜಾಲತಾಣದ ಮುಖಾಂತರ ನೇರವಾಗಿ, ತಮ್ಮಲ್ಲಿರುವಂತಹ ಮೊಬೈಲ್ ನ ಸಹಾಯದಿಂದ ಚೆಕ್ ಮಾಡಿಕೊಳ್ಳಬಹುದು.

ಒಮ್ಮೆ ಅರ್ಜಿ ಪರಿಶೀಲನೆ ಮುಕ್ತಾಯವಾದ ನಂತರದಲ್ಲಿ ಬ್ಯಾಂಕ್ ಖಾತೆಗೆ bank passbook ಹಣ ಸಂದಾಯವಾಗುತ್ತದೆ. ಇನ್ನೂ ಹೆಚ್ಚಿನ ಕುರಿತು ಮಾಹಿತಿ ಪಡೆಯಬೇಕಾದಲ್ಲಿ ಈ ಕೆಳಗೆ ನೀಡಿರುವ ಸರ್ಕಾರದ ಅಧಿಕೃತ ಜಾಲತಾಣ raitamitra ಕ್ಕೆ ಭೇಟಿ ನೀಡಿ ಮಾಹಿತಿಯನ್ನು ಕಲೆ ಹಾಕಬಹುದು.
Krishi bhagya yojane link : https://raitamitra.karnataka.gov.in/
ಇದನ್ನೂ ಓದಿರಿ:
2024 ರ ಬೆಳೆ ನಷ್ಟ ಪರಿಹಾರ ಹಣ ಜಮಾ ಆದ ರೈತರ ಪಟ್ಟಿ ಬಿಡುಗಡೆ. Crop insurance village list
Leave a Reply