
ರಾಜ್ಯದ ಎರಡು ಲಕ್ಷ ರೈತರುಗಳ ಖಾತೆಗೆ 76 ಕೋಟಿ ಬೆಳೆವಿಮೆ ಪರಿಹಾರವನ್ನು ಜಮಾ ಮಾಡಲಾಗಿದೆ ಇದರ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಯೋಣ.bele vime amount
ಕೃಷಿ ಇಲಾಖೆ ಜಂಟಿ ನಿರ್ದೇಶಕರು ಈ ಮೂಲಕ ಮಾಹಿತಿ ತಿಳಿಸಿದ್ದೇನೆಂದರೆ, ಪ್ರಸಕ್ತ ವರ್ಷದ ಮುಂಗಾರು ಹಂಗಾಮಿಯಲ್ಲಿ ಕೇಂದ್ರದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (Pradhan mantri fasal bhima yojana ) ಅಡಿಯಲ್ಲಿ ರೈತರಗಳು ತಮ್ಮ ಜಮೀನಿನ ಬೆಳೆಗಳಿಗೆ, ವಿಮೆಯನ್ನು ಕಟ್ಟಿರುತ್ತಾರೆ.

Bele vime amount
ಇದನ್ನೂ ಓದಿ: Bele parihara status : 69,573 ರೈತರಿಗೆ 48.45 ಕೋಟಿ ಬೆಳೆ ಹಾನಿ ಪರಿಹಾರ ಖಾತೆಗೆ ಜಮಾ.
ಅಂತಹ ಎರಡು ಲಕ್ಷ ರೈತ ಫಲಾನುಭವಿಗಳ ಖಾತೆಗೆ ಸುಮಾರು 76 ಕೋಟಿ ಬೆಳೆ ವಿಮೆ ಹಣವನ್ನು ಅಥವಾ ಪರಿಹಾರವನ್ನು ಜಮಾ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಅಕಾಲಿಕ ಮಳೆ ಸುರಿದು ಹಾಳಾದ ಬೆಳೆ ನಷ್ಟಗಳಿಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯ ಮಾರ್ಗಸೂಚಿ ಅನ್ವಯ, ರಾಜ್ಯದ ಕೆಲವು ಜಿಲ್ಲೆಗಳಿಗೆ ಬೆಳೆ ಪರಿಹಾರವನ್ನು ಈಗಾಗಲೇ ಜಮಾ ಮಾಡಲಾಗಿದೆ.
ಸದ್ಯ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಕಲಬುರ್ಗಿ ಜಿಲ್ಲೆಯ ಮುಂಗಾರು ಹಂಗಾಮಿನ ಬೆಳೆ ಹಾನಿಯಾಗಿರುವಂತಹ ಅರ್ಹ 2,04,073 ಕೃಷಿಕರ ಬ್ಯಾಂಕ್ ಖಾತೆಗಳಿಗೆ 76 ಕೋಟಿ ಬೆಳೆ ವಿಮೆ ಪರಿಹಾರವನ್ನು, ವಿಮಾ ಕಂಪನಿಯಿಂದ ಬೆಳೆ ಸಮೀಕ್ಷೆಯ ನಂತರ ಪಾವತಿ ಮಾಡಲಾಗಿದೆ ಎಂದು ಕಲಬುರ್ಗಿಯ ಜಂಟಿ ನಿರ್ದೇಶಕರು ಹೇಳಿದ್ದಾರೆ.
2024 ರ ಬೆಳೆ ನಷ್ಟ ಪರಿಹಾರ ಹಣ ಜಮಾ ಆದ ರೈತರ ಪಟ್ಟಿ ಬಿಡುಗಡೆ. Crop insurance village list
ಯಾವೆಲ್ಲ ಬೆಳೆಗಳಿಗೆ ವಿಮೆ ಮಾಡಲಾಗಿದೆ?
- 1. ತೊಗರಿ
- 2.ಹೆಸರು
- 3. ಉದ್ದು
- 4.ಸೋಯಾಬೀನ್
- 5. ಹತ್ತಿ
ನೀವು ಈಗ ನಿಮ್ಮ ಮೊಬೈಲ್ ನ ಮುಖಾಂತರ ಲೇಖನದ ಕೊನೆಯಲ್ಲಿ ಕೊಟ್ಟಿರುವ ಲಿಂಕನ ಸಹಾಯದಿಂದ ಪರಿಶೀಲನೆ ಮಾಡಬಹುದು.
Step-1 ಮೊದಲು ಸರ್ಕಾರದ ಬೆಳೆ ವಿಮೆ ಸ್ಟೇಟಸ್ ಅಧಿಕೃತ ಜಾಲತಾಣವಾದ samrakshane ಗೆ ಬೇಟಿ ಮಾಡಿ.
Step -2 ಆಮೇಲೆ ನಿಮ್ಮ ಮೊಬೈಲ್ ಪುಟದಲ್ಲಿ ಕಾಣಿಸುವ 2024 ಮತ್ತು 2025 ಎಂದು ವರ್ಷವನ್ನು ಆಯ್ಕೆ ಮಾಡಿ ನಂತರ ಋತು/kharif ಮುಂಗಾರು” ಎಂದು ಒತ್ತಿ GO ಮೇಲೆ ಕ್ಲಿಕ್ ಮಾಡಿ.

Step-3 ಮತ್ತೊಂದುಪುಟ ತೆರೆದುಕೊಂಡು ಅಲ್ಲಿ ನಿಮಗೆ “farmers” ಎಂಬ ಆಯ್ಕೆ ಗೋಚರವಾಗುತ್ತದೆ, ಅದರಲ್ಲಿ ಚೆಕ್ ಸ್ಟೇಟಸ್ ಎಂಬ ಆಯ್ಕೆ ಮೇಲೆ ಒತ್ತಿ ನಿಮ್ಮ ಮೊಬೈಲ್ ನಂಬರ್ ಅನ್ನು ನಮೂದು ಮಾಡಿ ಹಾಗೆಯೇ ಪಕ್ಕದಲ್ಲಿರುವ ಕ್ಯಾಪ್ಚ ನಂಬರನ್ನು ನಮೂದಿಸಿ search ಒತ್ತಿರಿ. ಇವೆಲ್ಲವನ್ನು ಸರಿಯಾದ ರೀತಿಯಲ್ಲಿ ಮಾಡಿರಿ, ಹಾಗೆಯೇ ಮುಂದಿನ ಪುಟದಲ್ಲಿ ನಿಮ್ಮ ಬೆಳೆ ವಿಮೆಯ ಎಲ್ಲಾ ಮಾಹಿತಿ ಕಾಣಿಸುತ್ತದೆ.
Bele vime samrakshane website : https://www.samrakshane.karnataka.gov.in/publichome.aspx
Related articles:
Bele vime parihara : ಈ ಜಿಲ್ಲೆಯ ರೈತರಿಗೆ 2,333 ಲಕ್ಷ ಮುಂಗಾರು ಬೆಳೆ ನಷ್ಟ ಪರಿಹಾರ ಜಮಾ.
Krishi bhagya yojane : ಕೃಷಿ ಹೊಂಡ ನಿರ್ಮಾಣ ಮಾಡಲು ಶೇ 80/- ರಷ್ಟು ಸಹಾಯಧನ, ಅರ್ಜಿ ಸಲ್ಲಿಸಲು ಮಾಹಿತಿ.
Pm kisan 19th installment : ಪಿಎಂ ಕಿಸಾನ್ 19ನೇ ಕಂತಿನ ಹಣ ಜಮಾ ದಿನಾಂಕ ಪ್ರಕಟ.
Leave a Reply