
ರಾಷ್ಟ್ರದ ಅತ್ಯುನ್ನತ ಮತ್ತು ವಿಶ್ವವಿಖ್ಯಾತ ಮಹಾ ಕುಂಭ ಮೇಳಕ್ಕೆ ತೆರಳುತ್ತಿರುವಂತಹ 18 ಪ್ರಯಾಣಿಕರು ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತದಿಂದ ಸಾವನ್ನಪ್ಪಿದ್ದಾರೆ. Delhi Kumbh mela
ಫೆಬ್ರವರಿ 15ನೇ ತಾರೀಕು ದೆಹಲಿ ರೈಲ್ವೆ ನಿಲ್ದಾಣದಿಂದ ಪ್ರಯಾಗ್ರಾಜ್ ( prayagraj ) ತೆರಳುತ್ತಿರುವಂತಹ ಎರಡು ರೈಲುಗಳನ್ನು ರದ್ದುಗೊಳಿಸಿದ್ದ ಕಾರಣದಿಂದ, ಪ್ಲಾಟ್ಫಾರ್ಮ್ 14 ಮತ್ತು ಪ್ಲಾಟ್ಫಾರ್ಮ್ 15 ರಲ್ಲಿ ಅತಿಯಾದ ಜನಸಂದಣಿ ಮತ್ತು ದಟ್ಟಣೆ ಉಂಟಾಗಿ, ಕಾಲು ತುಳೀತದಿಂದ, ಸುಮಾರು 18 ಜನ ಭಕ್ತರು ಸಾವನ್ನಪ್ಪಿದ್ದಾರೆ ಎಂದು ರೈಲ್ವೆ ಇಲಾಖೆಯು ಮಾಹಿತಿಯನ್ನು ತಿಳಿಸಿದೆ.

Maha Kumbh mela 2025
ಇದನ್ನೂ ಓದಿ: Darshan birthday : ಇಂದು ದರ್ಶನ್ ಹುಟ್ಟು ಹಬ್ಬ ಪ್ರಯುಕ್ತ ಸಿಡಿಪಿ ಸಿನಿಮಾ ಬಿಡುಗಡೆ.
ವಿಶ್ವವಿಖ್ಯಾತ ಮಹಾ ಕುಂಭಮೇಳಕ್ಕೆ ಕೋಟ್ಯಂತರ ಭಕ್ತರು ಆಗಮಿಸುತ್ತಿದ್ದು, ದೇಶದ ನಾನಾ ಕಡೆಗಳಿಂದ ರೈಲ್ವೆ ಇಲಾಖೆಯು ಪ್ರಯಾಗರಾಜಗೆ ತೆರಳಲು ರೈಲು ವ್ಯವಸ್ಥೆಯನ್ನು ಮಾಡಿರುತ್ತಾರೆ.
ಇದರಲ್ಲಿ ದೆಹಲಿ ರೈಲ್ವೆ ನಿಲ್ದಾಣದ ಫೆಬ್ರವರಿ 15ನೇ ತಾರೀಕು ಶನಿವಾರ ತಡರಾತ್ರಿಯಲ್ಲಿ, ಹಠಾತ್ತನೆ ಎರಡು ರೈಲು ರದ್ದುಗೊಳಿಸಿದ್ದರಿಂದ ಈ ಅವಘಡ ಸಂಭವಿಸಿದೆ.
ಸತ್ತವರಲ್ಲಿ ಮಹಿಳೆಯರು ಸಹ ಇದ್ದಾರೆಂಬುದು ವರದಿಯ ಮುಖಾಂತರ ಬಯಲಾಗಿದೆ. ಈ ಬಗ್ಗೆ ದೆಹಲಿಯ ಅಗ್ನಿಶಾಮಕ ಸೇವೆಗಳ ಮುಖ್ಯಸ್ಥರಾದಂತಹ ಅತುಲ್ ಗರ್ಗ್ ಅವರು ಇದಕ್ಕೆ ಕಾರಣ ಇನ್ನೂ ಸಹ ಸ್ಪಷ್ಟವಾಗಿಲ್ಲ, ಕೇವಲ ರೈಲು ರದ್ದುಗೊಳಿಸುವಿಕೆಯ ಕಾರಣದಿಂದ ಆಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದಿದ್ದಾರೆ.
Gold price today : ಇಂದಿನ ಚಿನ್ನ ಮತ್ತು ಬೆಳ್ಳಿಯ ದರ.
Leave a Reply