
ಭಾರತದ ಅಂಚೆ ಇಲಾಖೆಯಲ್ಲಿ ಬಹು ಕಾರ್ಯ ಸಿಬ್ಬಂದಿ ಹುದ್ದೆಗಳಲ್ಲಿ ಬೃಹತ್ ನೇಮಕಾತಿ ಪ್ರಕ್ರಿಯೆ ಭಾರತೀಯ ಅಂಚೆ ಇಲಾಖೆ ಘೋಷಣೆ ಮಾಡಿದೆ. ಎಸ್ ಎಸ್ ಎಲ್ ಸಿ ತೇರ್ಗಡೆ ಹೊಂದಿರುವಂತಹ ಉದ್ಯೋಗದ ಆಕಾಂಕ್ಷಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. India post MTS jobs
ದೇಶಾದ್ಯಂತ ಭಾರತ ಅಂಚೆ ಇಲಾಖೆಯು MTS ಹುದ್ದೆಗಳನ್ನು ದೇಶದ ಎಲ್ಲಾ ರಾಜ್ಯಗಳಲ್ಲಿ ಭರ್ತಿ ಮಾಡಿಕೊಳ್ಳಲು ಒಟ್ಟು 18200 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಸುತ್ತೋಲೆಯನ್ನು ಹೊರಡಿಸಿದೆ.

India post MTS jobs ಅರ್ಹತೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕಡ್ಡಾಯವಾಗಿ 10ನೇ ತರಗತಿಯನ್ನು ಉತ್ತೀರ್ಣ ಆಗಿರಬೇಕು, ಅಲ್ಲದೆ ಅವಶ್ಯಕತೆ ಇದ್ದಲ್ಲಿ ಕಂಪ್ಯೂಟರ್ ಕೌಶಲ್ಯಗಳು ಮತ್ತು ಸ್ಥಳೀಯ ಭಾಷೆಯಲ್ಲಿ ಸುಲಲಿತವಾಗಿ ಮಾತನಾಡ ಬೇಕು. ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ 18 ರಿಂದ 25 ವರ್ಷ ಒಳಗಿನ ವಯೋಮಿತಿ ಇರುತ್ತದೆ.
ವೇತನ ಮತ್ತು ಅರ್ಜಿ ಸಲ್ಲಿಸಲು ಕೊನೆ ದಿನ.
ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳಿಗೆ ವೇತನ ಪ್ಯಾಕೇಜ್ ಮಾಸಿಕ ಹದಿನೈದು ಸಾವಿರದಿಂದ 29,380 ರವರೆಗೆ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಆಸಕ್ತಿ ಇರುವಂತಹ ಅಭ್ಯರ್ಥಿಗಳು ಭಾರತೀಯ ಅಂಚೆ ಇಲಾಖೆ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಆನ್ಲೈನ್ ಮುಖಾಂತರವಾಗಿ ಅರ್ಜಿಗಳನ್ನು ಜನವರಿ 28ರ ಒಳಗಾಗಿ ಸಲ್ಲಿಸತಕ್ಕದ್ದು.
Ration card amendment : ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶ, ಬೇಗ ಮಾಡಿಸಿ.
ಬೇಕಾದ ದಾಖಲೆಗಳು.
ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ಮೂಲ ದಾಖಲೆತ್ತಿಗಳಾದ ಆಧಾರ್ ಕಾರ್ಡ್ 10ನೇ ತರಗತಿ ಪ್ರವೇಶ ಪತ್ರ ಮತ್ತು ಮಾರ್ಕ್ಸ್ ಕಾರ್ಡ್ ಪಾಸ್ ಪೋರ್ಟ್ ಅಳತೆಯ ಛಾಯಾಚಿತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ ಜನ್ಮ ಪ್ರಮಾಣ ಪತ್ರ ಸಕ್ರಿಯೆಯಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ಪಡೆದುಕೊಂಡಿರಬೇಕು.
ಅಂಚೆ ಇಲಾಖೆ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ತಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಅನ್ನು ಬಳಸಿ ನೋಂದಾಯಿಸಿಕೊಳ್ಳಿ. ನಂತರ ನಿಮ್ಮ ಅಗತ್ಯವಿರುವಂತಹ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿಯನ್ನು ಪರಿಶೀಲನೆ ಮಾಡಿಕೊಂಡು ಕೊನೆಯದಾಗಿ ಅರ್ಜಿ ಸಬ್ಮಿಟ್ ಮಾಡಿರಿ.
ಈ ನೇಮಕಾತಿಯ ಹೆಚ್ಚು ಮಾಹಿತಿಗಾಗಿ ಈ ಜಾಲತಾಣಕ್ಕೆ ಭೇಟಿ ಮಾಡಿ : www.indiapost.gov.in
ಇದನ್ನೂ ಓದಿ : Bele vime parihara : ಈ ಜಿಲ್ಲೆಯ ರೈತರಿಗೆ 2,333 ಲಕ್ಷ ಮುಂಗಾರು ಬೆಳೆ ನಷ್ಟ ಪರಿಹಾರ ಜಮಾ.
https://kannadabandhu.com/puc-student-diganth/